ಬೆಳಗಾವಿ: ದೇಶದ ಸುರಕ್ಷತೆಯ ದೃಷ್ಟಿಯಿಂದ ದೇಶದ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಅವಶಕತೆ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಸಹ ಸಂಪರ್ಕ ಪ್ರಮುಖ ರಾಮ ಮಾಧವಜಿ ಪ್ರತಿಪಾದಿಸಿದ್ದಾರೆ.
Clik here to view.

RSS Akhil Bharatiya Sah Sampark pramukh Ram Madhav speaks at Belgaum, March-02-2013
ಸ್ವಾಮಿ ವಿವೇಕಾನಂದ ಸಾರ್ಧಾಶಷ್ಟಿ ಸಮಿತಿ ವತಿಯಿಂದ ನಗರದ ಮರಾಠಾ ಮಂದಿರದಲ್ಲಿ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತದ ಮುಂದಿರುವಬ ಸುರಕ್ಷತೆಯ ಸವಾಲುಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಅಧಿಕಾರದಲ್ಲಿರುವವರು ಈ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರೆಗೆ ದೇಶ ಸ್ವಾಲಂಬಿ ಸಾಧಿಸುವದಿಲ್ಲ. ಸ್ವಾವಲಂಬನೆ ಇಲ್ಲದಿರುವದು ಶತ್ರು ರಾಷ್ಟ್ರಗಳಿಗೆ ಬಲ ನೀಡುತ್ತಿದೆ ಎಂದರು.
೧೯೬೨ ರಲ್ಲಿ ನಡೆದ ಚೀನಾ ಯುದ್ದದ ನಂತರವೇ ಭಾರತ ಈ ಬಗ್ಗೆ ಚಿಂತನೆ ನಡೆಸಬೇಕಾಗಿತ್ತು. ಆದರೆ ಅಂತಹ ಚಿಂತನೆ ನಡೆಯಲಿಲ್ಲ. ನೆರೆಯ ಪಾಕಿಸ್ತಾನವು ಭಾರತದ ೪೨ ಸಾವಿರ ಕಿ.ಮೀ. ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಅದನ್ನು ಹಿಮ್ಮಟ್ಟಿಸುವ ಬಲ ಭಾರತಕ್ಕಿದ್ದರೂ ಸಹ ಅಂದಿನ ಪ್ರಧಾನಿ ಜವಾಹರಲಾಲ ನೆಹರು ಅವರು ತಾವು ಶಾಂತಿ ಪ್ರಿಯರು ಎಂದು ತೋರಿಸಿಕೊಳ್ಳಲು ಸಂಯುಕ್ತ ರಾಷ್ಟ್ರದ ಮೋರೆ ಹೋದರು. ಇಂದಿಗೂ ಆ ಭೂಮಿ ಪಾಕಿಸ್ತಾನದ ವಶದಲ್ಲಿದೆ. ೪೨ ಸಾವಿರ ಕಿ.ಮಿ.ಭೂಮಿಯಲ್ಲಿ ೫ ಸಾವಿರ ಕಿ.ಮಿ. ಭೂಮಿಯನ್ನು ಪಾಕಿಸ್ತಾನವು ಚೀನಾ ನೀಡುವ ಮೂಲಕ ಚೀನಾ ದೊಂದಿಗಿನ ಸಂಭಂದ ಬಲಪಡಿಸಿಕೊಂಡಿದೆ ಎಂದು ತಿಳಿಸಿದರು.
ಪಾಕಿಸ್ತಾನ ಮತ್ತು ಚೀನಾ ದೇಶಗಳು ಸೇರಿ ಭಾರತದ ನಾಲ್ಕು ಕಡೆ ವೈಹ ರಚಿಸಿವೆ. ಇಂತಹ ಸಮಯದಲ್ಲಿ ಸುರಕ್ಷತೆಯ ಆಯಕಟ್ಟಿನ ಸ್ಥಳವಾಗಿರುವ ಸಿಯಾಚೀನ ಚೀನಾದ
ವಶದಲ್ಲಿರುವದು ದೇಶದ ಸುರಕ್ಷತೆಗೆ ದೊಡ್ಡ ಸವಾಲಾಗಿದೆ ಎಂದರು.
ಭ್ರಷ್ಟಾಚಾರ ಸಹ ದೇಶದ ಸುರಕ್ಷತೆಗೆ ಬಹು ದೊಡ್ಡ ಸವಾಲಾಗಿದೆ. ಶಸ್ತ್ರಾಸ್ತ್ರ ಖರೀದಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ದೇಶಕ್ಕೆ ಅಪಾಯಕಾರಿ ಎಂದ ಅವರು, ದೇಶದ ಸುರಕ್ಷತೆಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವವರನ್ನು ಕ್ಷಣ ಕಾಲವು ಸಹಿಸಬಾರದು ಎಂದು ಆಗ್ರಹಿಸಿದರು.
Image may be NSFW.
Clik here to view.
ಪ್ರಸಕ್ತ ಅಧಿವೇಶನದಲ್ಲಿ, ಬಾಂಗ್ಲಾ ದೇಶಕ್ಕೆ ೧೦ ಸಾವಿರ ಎಕರೆ ಭೂಮಿ ನೀಡುವ ಭೂದಾನ ಕಾಯ್ದೆ ಜಾರಿಗೆ ತರಲು ಯುಪಿಎ ಸರಕಾರ ಸಿದ್ದತೆ ನಡೆಸಿರುವದನ್ನು ಟೀಕಿಸಿದ ಅವರು ಯಾವ ದೇಶ ಭಾರತದಲ್ಲಿ ಹೂಜಿ ಯಂತಹ ಭಯೋತ್ಪಾದನೆ ಸಂಘಟನೆಯನ್ನು ಬೆಳೆಸುತ್ತಿದೆಯೊ ಅಂತಹ ದೇಶಕ್ಕೆ ಭೂ ದಾನ ಮಾಡುತ್ತಿರುವದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು ಆಳುವವರ ಮನೋಸ್ಥಿತಿ ಬದಲಾಗಬೇಕು ಎಂದರು.
ಸ್ವಾಮಿ ವಿವೇಕಾನಂದರ ೧೫೦ ನೇ ವರ್ಷಾಚರಣೆಯ ಈ ಸಂಧರ್ಭದಲ್ಲಿ ದೇಶದ ಯುವಕರು ಮನೋಬಲ ಬೆಳೆಸಿಕೊಳ್ಳುವ ಮೂಲಕ ಶಕ್ತಿಯುತ ರಾಷ್ಟ್ರ ನಿರ್ಮಾಣಕ್ಕೆ ಅಣಿಯಾಗಬೇಕು ಎಂದು ಕರೆ ನೀಡಿದರು.
ಗೋಪಾಲ ಜಿನಗೌಡ ಅಧ್ಯಕ್ಷತೆ ವಹಿಸಿದ್ದರು. ನಗರ ಅಧ್ಯಕ್ಷ ಎಲ್.ಕೆ. ಹಾವನೂರ ಸ್ವಾಗತಿಸಿದರು. ಪರಮೇಶ್ವರ ಹೆಗಡೆ ಅತಿಥಿಗಳ ಪರಿಚಯ ಮಾಡಿದರು.
***************************